ಮೈಕಲ್ ಕಾಲಿನ್ಸ್(16 ಅಕ್ಟೋಬರ್ 1890 - 22 ಆಗಸ್ಟ್ 1922) ಐರ್ಲೆಂಡಿನ ರಾಜಕೀಯ ಧುರೀಣ. == ಆರಂಭಿಕ ಜೀವನ == ಕೌಂಟಿ ಕಾರ್ಕ್‍ನ ಕ್ಲೊನಾಕಿಲ್ಟಿಯದ ಹತ್ತಿರದ ಕಾರ್ಕ್ ಎಂಬಲ್ಲಿ ರೈತ ಮನೆತನವೊಂದರಲ್ಲಿ ಹುಟ್ಟಿದz. 1906ರಿಂದ 1916ರ ವರೆಗೆ ಲಂಡನ್ನಿನಲ್ಲಿ ಅಂಚೆಯ ಗುಮಾಸ್ತನಾಗಿಯೂ. ಕೆಲಕಾಲ ಸಲಹೆ ವಕೀಲನ ಕಛೇರಿಯಲ್ಲೂ ಕೆಲಸ ಮಾಡಿದ. == ಸ್ವಾತಂತ್ರ್ಯ ಹೋರಾಟ == ಐರಿಷ್ ಸ್ವಾತಂತ್ರ್ಯ ಸ್ವಯಂಸೇವಕ ಪಡೆಯಲ್ಲಿ ಸೇರಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿದ. ಆಗ ಬ್ರಿಟಿಷರು ಈತನನ್ನು ಬಂಧಿಸಿ ಸೆರೆಯಲ್ಲಿಟ್ಟು 1917ರಲ್ಲಿ ಬಿಡುಗಡೆ ಮಾಡಿದರು. 1918ರಲ್ಲಿ ವೆಸ್ಟ್ ಕಾರ್ಕ್ ಲೋಕಸಭಾ ಸದಸ್ಯನಾಗಿ ಚುನಾಯಿತನಾದ. ಅನಂತರ ಸ್ವಾತಂತ್ರ್ಯ ಚಳವಳಿಯ ನೇತಾರರಲ್ಲಿ ಒಬ್ಬನಾದ. ಪ್ರಮುಖ ವ್ಯಕಿಗಳೆಲ್ಲ ಜೈಲು ಸೇರಿದ್ದಾಗ ಕಾಲಿನ್ಸ್ ಸಮರ್ಥ ಗೂಢಚಾರರೆನಿಸಿದ್ದ ಐರಿಷ್ ಸ್ವಾತಂತ್ರ್ಯ ಪಡೆಯವರ ನಾಯಕನಾಗಿ ದೇಶದ ಅರ್ಥ ಮತ್ತು ಗೃಹಖಾತೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡ. ನಿರ್ದಿಷ್ಟವಾದ ಸುದ್ದಿಗಳು ಪಡೆದು ಸಮಯೋಚಿತವಾಗಿ ನಡೆಯುತಿದ್ದುದೇ ಕಾಲಿನ್ಸನ ಕ್ರಾಂತಿಕಾರಕ ಜಯಕ್ಕೆ ಕಾರಣವಾಯಿತು. ಂಕನ್ ಜೈಲಿನಲ್ಲಿದ್ದ ಸ್ವಾತಂತ್ರ್ಯ ಸಂಗ್ರಾಮದ ನಾಯಕ ಎಮನ್ ಡಿ ವಲೆರನ ಬಿಡುಗಡೆಗೆ ಈತ ಕಾರಣನಾದ. ಈ ವರ್ತನೆ ಬ್ರಿಟಿಷ್ ಸರ್ಕಾರದ ಕಣ್ಣನ್ನು ಕೆಂಪಾಗಿಸಿತು. ಕಾಲಿನ್ಸನನ್ನು ಹಿಡಿದು ಕೊಟ್ಟವರಿಗೆ 10,000 ಪೌಂಡುಗಳ ಬಹುಮಾನ ನೀಡುವುದಾಗಿ ಬ್ರಿಟಿಷ್ ಸರ್ಕಾರ ಘೋಷಿಸಿತು. ಆದರೂ ಈತ ಡಬ್ಲಿನ್‍ನ ಬೀದಿಗಳಲ್ಲಿ ಸೈಕಲ್ ಮೇಲೆ ಧೈರ್ಯವಾಗಿ ತಿರುಗುತ್ತಿದ್ದ. ಕೆಲವು ಕಾರಣಗಳಿಂದಾಗಿ ಎಮನ್ ಡಿ ವಲೆರ ಬ್ರಿಟಿಷರಿಂದ ಐರ್ಲೆಂಡಿನ ಸ್ವಾತಂತ್ರ್ಯಗಳಿಸಲು ಅಸಮರ್ಥನಾದ. ಆಗ ಕಾಲಿನ್ಸ್ ಬ್ರಿಟಿಷರೊಂದಿಗೆ ಸಂಧಾನ ನಡೆಸಿದ ಕಾರಣವಾಗಿ ಕೆಲವೂಂದು ಒಪ್ಪಂದಗಳ ಮೇಲೆ ದಕ್ಷಿಣ ಐರ್ಲೆಂಡ್ ಸ್ವಾತಂತ್ರ್ಯ ಪಡೆಯಿತು ಈ ಒಪ್ಪಂದಕ್ಕೆ ವಲೆರನ ವಿರೋಧವಿತ್ತು. ಕಾಲಿನ್ಸ್ ತಾತ್ಕಾಲಿಕ ಸರ್ಕಾರದ ಅಧ್ಯಕ್ಷನಾದ. ಐರ್ಲೆಂಡಿನ ಉಗ್ರಗಾಮಿಗಳು ಕಾಲಿನ್ಸ್ ಈ ಮುತ್ಸದ್ಸಿತನವನ್ನು ಒಪ್ಪದೆ ದೇಶಾದ್ಯಂತ ಒಳಯುದ್ಧ ಆರಂಭಿಸಿದರು. 1922ರ ಆಗಸ್ಟ್ ತಿಂಗಳಲ್ಲಿ ಪ್ರಯಾಣ ಮಾಡುತಿದ್ದ ಕಾಲಿನ್ಸ್‍ನನ್ನು ಉಗ್ರಪಕ್ಷದ ಶತ್ರುವರ್ಗದವರು ಸ್ಕಿಬೆರೀನೆ ಮತ್ತು ಕಾರ್ಕ್ ನಗರಗಳ ಮಧ್ಯೆ ಹೊಂಚುಹಾಕಿ ಕಾದಿದ್ದು ಗುಂಡಿಕ್ಕಿ ಕೊಂದರು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == - 22 1901 , 10 2012-03-01 ವೇಬ್ಯಾಕ್ ಮೆಷಿನ್ ನಲ್ಲಿ.,